ಕಪ್ಪಿನಿ : ನೀತಿಬೋಧಕವಾದ ನಂಜುಂಡಶತಕವನ್ನು ನಂಜನಗೂಡು ನಂಜುಂಡೇಶ್ವರನ ಅಂಕಿತದಲ್ಲಿ ಬರೆದಿರುವ (1880) ಕವಿ ನಂಜುಂಡಲಿಂಗ ನತಜನ ಸಂಗಾ ಎಂಬುದು ಅಂಕಿತ. ಸಂಸ್ಕೃತಶ್ಲೋಕಗಳ ಪರಿಮಳದಲರುಗಳ ಕಂದ ಪದ್ಯಾಂತರದೊಳ್ ಸರಗಟ್ಟುವೆ ಸುಜನರ ಕಿವಿದುರುಬಿಗೆ-ಎಂಬ ಮಾತಿನಿಂದ ಇವು ಸಂಸ್ಕೃತ ಪದ್ಯಗಳ ಕನ್ನಡ ಭಾಷಾಂತರ ಎಂಬುದು ಸ್ಪಷ್ಟವಾಗುತ್ತದೆ. ಗ್ರಂಥದಲ್ಲಿ 103 ಕಂದಪದ್ಯಗಳಿವೆ.           (ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ